Sunday, September 24, 2017

2.ಗೋಸೇವಾ ವರ್ಲ್ಡ್ ಹೇಗೆ ಉಗಮವಾಯಿತು? ಇದರ ಉದ್ದೇಶ ಮತ್ತು ಗುರಿಗಳೇನು?GWK

2. ಗೋಸೇವಾ ವರ್ಲ್ಡ್ ಹೇಗೆ ಉಗಮವಾಯಿತು?  ಇದರ ಉದ್ದೇಶ ಮತ್ತು ಗುರಿಗಳೇನು?

• ಗೋಸೇವಾ ವರ್ಲ್ಡ್ ಪ್ರಾರಂಭದ ಉದ್ದೇಶಗಳು :

೨೦೦೪ರ ನನ್ನ ಕಾಲೇಜು ದಿನಗಳಲ್ಲಿ ನಮ್ಮ ಪ್ರಾಧ್ಯಾಪಕರಾದ ಶ್ರೀಯುತ ಷರೀಪ್ ಶೇಖ್ ರವರು ಹಸುಗಳು ತಮ್ಮ ಆಹಾರಕ್ಕಾಗಿ ಪ್ಲಾಸ್ಟಿಕ್ ನ್ನು ತಿನ್ನುವುದರಿಂದ ಆಗುವ ತೊಂದರೆಗಳ ಕುರಿತು ವಿವರಿಸುತ್ತಿದ್ದರು.  ಅವರಿಗೆ ಬಗ್ಗೆ ಇದ್ದ ಚಿಂತೆ ಮತ್ತು ಭಾವನೆಗಳ ಬಗ್ಗೆ  ನನ್ನ ತಲೆಗೆ ಅಷ್ಟಾಗಿ ಮುಟ್ಟಲಿಲ್ಲ ಮತ್ತು ವಿಷಯದ ಗಂಭೀರ ಪರಿಣಾಮದ ಬಗ್ಗೆ ನಾ ಯೋಚನೇನೆ ಮಾಡಲಿಲ್ಲ.

ಇದಾದ ಕೆಲ ವರ್ಷಗಳ ನಂತರ, ನಾನು ಸ್ವಂತ ಊರಾದ ಚೆನ್ನೈನಲ್ಲಿ ತೊಂದರೆಯ ಬಗ್ಗೆ ಬಹಳ ಹತ್ತಿರದಿಂದ ನೋಡಿದೆ.  ಅಪಘಾತಗಳಲ್ಲಿ ಹಸುಗಳು ಸಾಯುವುದನ್ನು, ಆಹಾರಕ್ಕಾಗಿ  ಬಿತ್ತಿಪತ್ರಗಳನ್ನು, ಪ್ಲಾಸ್ಟಿಕ್ ಚೀಲಗಳನ್ನು, ಮರಳು ತಿನ್ನುವುದನ್ನು ಕಂಡು, ಅಲ್ಲದೇ ಜನರು ಹಸುವಿನ ಮಾಂಸಕ್ಕಾಗಿ ಸಾಲಾಗಿ ನಿಂತಿರುವುದನ್ನು ಕಂಡು ನನಗೆ ದಿಗ್ಬ್ರಾಂತವಾಯಿತು. ಗೂಗಲ್ ಹೇಳುತ್ತದೆ, ಇದು ಕೇವಲ ಚೆನ್ನೈ ನಗರದಲ್ಲಿ ಮಾತ್ರ ಸಂಭವಿಸುತ್ತಿಲ್ಲ, ಇದು ಭಾರತ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಮತ್ತು ಎಲ್ಲಾ ರಾಜ್ಯಗಳಲ್ಲಿ ನೆಡೆಯುತ್ತಿದೆ.

ನಮ್ಮ ದೇಶದ ಹಸುಗಳು ಹಾಗೂ ಇನ್ನಿತರ ಪ್ರಾಣಿಗಳಿಗೆ ಪ್ಲಾಸ್ಟಿಕ್ ನಿಂದ ಆಗುವ ತೊಂದರೆಗಳ ಕುರಿತು Plastic Cow Project-Karuna society ಮುಖಾಂತರ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವ  ಒಬ್ಬ ವಿದೇಶಿ ಮಹಿಳೆಯನ್ನು ಕಂಡು ಆಶ್ಚರ್ಯಚಕಿತನಾದೆ.   ಸಂಸ್ಥೆಯ ಶಸ್ತ್ರಚಿಕಿಸ್ತಕರು ಸುಮಾರು ೩೦ರಿಂದ ೬೦ಕೆಜಿಯವರೆಗೆ ಪ್ಲಾಸ್ಟಿಕ್ ಬ್ಯಾಗ್ ಗಳನ್ನು, ಬಳಸಿದ ಕರವಸ್ತ್ರಗಳನ್ನು, ಉಗರುಗಳನ್ನು, ಮರಳು ಹಾಗೂ ಇನ್ನಿತರ ಕೆಲಸಕ್ಕೆ ಬಾರದ ವಸ್ತುಗಳನ್ನು ಹಸುಗಳ ಹೊಟ್ಟೆಯಿಂದ ಹೊರತೆಗೆದು ಅವುಗಳನ್ನು ರಕ್ಷಿಸಿದ್ದಾರೆ. ವಿಧಾನದಿಂದ ಹಲವಾರು ಹಸುಗಳನ್ನು ಇವರ ತಂಡ ರಕ್ಷಿಸುತ್ತಿದೆ

ಎಲ್ಲಾ ಘಟನೆಗಳಿಂದ ನಾನು ತುಂಬಾ ಅಘಾತಕ್ಕೊಳಗಾದೆ ಮತ್ತು ಅಂತಿಮವಾಗಿ    ಗೋಸೇವಾ ವರ್ಲ್ಡ್ ಚಳುವಳಿಯನ್ನು ಪ್ರಾರಂಭಿಸಲು ಪ್ರೇರಣೆಯಾಯಿತು.  ಭಾರತ ದೇಶದಾದ್ಯಂತ ಎಲ್ಲಾ ಹಸುಗಳ ಉಳಿವಿಗೊಸ್ಕರ  ಗೋಸೇವಾ ವರ್ಲ್ಡ್ ಯೋಜನೆಯು ಹೊಸ ವಿಚಾರದಿಂದ ಪ್ರಚೋದನೆ ನೀಡುತ್ತಾ ಪವಾಡಸದೃಶ ಫಲಿತಾಂಶವನ್ನು ನೀಡುತ್ತಿದೆ. ನಾನು ನಂಬುತ್ತೇನೆ, ಯೋಜನೆಯು  ಪವಿತ್ರ ಹಸುಗಳಿಗೆ ಸಹಾಯ ಮತ್ತು ನಮ್ಮ ಚಳುವಳಿಯಿಂದ ಪ್ರತಿಯೊಬ್ಬರಿಗೆ ತೃಪ್ತಿ ನೀಡುತ್ತದೆ ಎಂದು.

ಹಸುಗಳನ್ನು ರಕ್ಷಿಸೋಣ. ***ಬನ್ನಿ ಹೇಳೋಣ ಎಲ್ಲರಿಗೋಸ್ಕರ ಹಸು***

ಗಮನಿಸಿಗೋಸೇವಾ ವರ್ಲ್ಡ್ ಯಾವುದೇ ಧರ್ಮದ, ಯವುದೇ ನಿರ್ದಿಷ್ಟವಾದ ಜನರಿಗಾಗಲೀ, ಯಾರೋ ಒಬ್ಬರಿಗಾಗಿ ರಚನೆ ಮಾಡಿಲ್ಲ.  ಇದು  ಸತ್ಯದ ಕುರಿತಾಗಿದ್ದು ಮತ್ತು ನಮ್ಮ  ವಿಷಯವು ಮೌಲ್ಯಗಳು-ಕೃಪೆ-ಉತ್ತೇಜನ ಆಗಿದೆ



3. ಗೋಸೇವಾ ವರ್ಲ್ಡ್ ಯೋಜನೆಯ ಪ್ರಮುಖ ಅಂಶಗಳು

4. ಗೋಸೇವಾ ವರ್ಲ್ಡ ಎಲ್ಲರಿಗೂ ಏಕೆ ಬೇಕು?

5. ಪ್ರಾಮಾಣಿಕ ಧನ್ಯವಾದಗಳೊಂದಿಗೆ


6. ನಾನು ಸ್ವತಂತ್ರನಾಗಿದ್ದರೆ ಏಕೆ ಬೆಂಬಲ ನೀಡಬೇಕು?


No comments: